

ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್, ದಕ್ಷಿಣ ಭಾರತದ ಚೆಲುವೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾರತೀಯ ಮೂಲದ ವಿನಿ ರಾಮನ್ ಸದ್ಯ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದಾಳೆ. ಈಕೆಯ ಜೊತೆ ಮ್ಯಾಕ್ಸ್ ವೆಲ್ ಡೇಟಿಂಗ್ ನಡೆಸ್ತಿರೋದು ಪಕ್ಕಾ ಆಗಿದೆ.
ಇತ್ತೀಚೆಗಷ್ಟೆ ವಿನಿ, ಮ್ಯಾಕ್ಸ್ ವೆಲ್ ಜೊತೆಗಿರುವ ಫೋಟೋವನ್ನು ಕೂಡ ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. 2017 ರಿಂದ್ಲೂ ವಿನಿ ಹಾಗೂ ಮ್ಯಾಕ್ಸ್ ವೆಲ್ ಡೇಟಿಂಗ್ ನಡೆಸ್ತಿದ್ದಾರೆ.
ಇತ್ತೀಚೆಗಷ್ಟೆ ನಡೆದ ಆಸ್ಟ್ರೇಲಿಯನ್ ಕ್ರಿಕೆಟ್ ಅವಾರ್ಡ್ಸ್ ಕಾರ್ಯಕ್ರಮಕ್ಕೂ ಮ್ಯಾಕ್ಸ್ ವೆಲ್ ತಮ್ಮ ಗೆಳತಿಯನ್ನು ಕರೆದೊಯ್ದಿದ್ದರು. ಪಾರ್ಟಿ, ಫಂಕ್ಷನ್ ಗಳಲ್ಲೆಲ್ಲಾ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ .
ವಿನಿ ಹಾಗೂ ಮ್ಯಾಕ್ಸ್ ವೆಲ್ ಜೊತೆಯಾಗಿರುವ ಹತ್ತಾರು ಫೋಟೋಗಳು ಈಗಾಗ್ಲೇ ವೈರಲ್ ಆಗಿವೆ. ವಿದೇಶಿ ಕ್ರಿಕೆಟರ್ ಗಳು ಭಾರತದ ಸುಂದರಿಯರ ಜೊತೆ ಡೇಟಿಂಗ್ ನಡೆಸೋದು ಹೊಸ ಟ್ರೆಂಡ್ ಆಗಿಬಿಟ್ಟಿದೆ.
ಪಾಕ್ ಕ್ರಿಕೆಟರ್ ಹಸನ್ ಅಲಿ, ಭಾರತದ ಶಾಮಿಯಾ ಆರ್ಝೂ ಎಂಬಾಕೆಯನ್ನು ಮದುವೆಯಾಗ್ತಿದ್ದಾರೆ. ಸದ್ಯದಲ್ಲೇ ಮ್ಯಾಕ್ಸ್ ವೆಲ್ ಹಾಗೂ ವಿನಿ ಕೂಡ ವಿವಾಹವಾದರೂ ಅಚ್ಚರಿಯಿಲ್ಲ.
ವಿದೇಶೀ ಕ್ರಿಕೆಟಿಗರ ಮನಗೆಲ್ಲುವಲ್ಲಿ ಭಾರತದ ಚೆಲುವೆಯರೇ ಮುಂದಿದ್ದಾರೆ. ಈ ಹಿಂದೆ 2014ರಲ್ಲಿ ಆಸೀಸ್ ನ ಶಾನ್ ಟೈಟ್, ಭಾರತೀಯ ಮೂಲದ ಯುವತಿಯನ್ನೇ ವರಿಸಿದ್ದರು.