

ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚಿಕಿತ್ಸೆಗೆ ಇಂಗ್ಲೆಂಡ್ ಗೆ ಹೋಗಲು ಸಿದ್ದತೆ ನಡೆಸಿದ್ದಾರೆ.
ಕಳೆದ ಇಂಗ್ಲೆಂಡ್ ಪ್ರವಾಸ ಮತ್ತು ವಿಶ್ವಕಪ್ ಪಂದ್ಯಾವಳಿ ಹೊತ್ತಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಂದಲೇ ಈಗಲೂ ಚಿಕಿತ್ಸೆ ಪಡೆಯಲಿದ್ದಾರೆ.
ದಕ್ಷಿಣ ಆಫ್ರಿಕಾ ಪಂದ್ಯಾವಳಿಯಲ್ಲಿ ಬೆನ್ನುನೋವು ತೀವ್ರವಾಗಿ ಉಲ್ಬಣಿಸಿತ್ತು. ಮಂಡಳಿಯ ಹಿರಿಯ ಅಧಿಕಾರಿಗಳು ಹೇಳುವಂತೆ, ಯುಕೆ ವೈದ್ಯ ತಜ್ಞರ ಸಂಪರ್ಕದಲ್ಲಿದ್ದಾರೆ. ಬುಧವಾರ ಯುಕೆಗೆ ಹೊರಡಲಿದ್ದಾರೆ.
ಅಲ್ಲದೇ ಹಾರ್ದಿಕ್ ಪಾಂಡ್ಯ ಜೊತೆ ವೈದ್ಯರು ಮತ್ತೊಂದು ಸುತ್ತು ಮಾತುಕತೆ ನಡೆಸಿದ ಬಳಿಕ ಶಸ್ತ್ರಚಿಕಿತ್ಸೆಯೇ ಅಥವಾ ಬರೀ ಔಷಧಿಗಳಿಂದಲೇ ಗುಣಮುಖರಾಗುವಂತೆ ಮಾಡಲು ಚಿಕಿತ್ಸೆಯೇ ಅನ್ನೋದು ನಿರ್ಧರವಾಗಲಿದೆ.