

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗೆ ವಿಶ್ವಾದಾದ್ಯಂತ ಅಭಿಮಾನಿಗಳಿದ್ದಾರೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಆಟಗಾರರು ಕೂಡಾ ಕೊಹ್ಲಿ ಬ್ಯಾಟಿಂಗ್ ಗೆ ಮನಸೋತಿದ್ದಾರೆ. ಪಾಕ್ ನಲ್ಲೂ ಕೂಡಾ ಕೊಹ್ಲಿಗೆ ಸಾಕಷ್ಟು ಫ್ಯಾನ್ಸ್ ಗಳಿದ್ದಾರೆ. ಇದಕ್ಕೆ ಉದಾಹರಣೆ ಯುವ ಕ್ರಿಕೆಟಿಗ ಉಸಾಮಾ ಬಲೂಚ್.
ಉಸಾಮಾ ಬ್ಯಾಟ್ ಬೀಸುವುದನ್ನು ನೋಡಿದ್ರೆ, ಒಂದು ಕ್ಷಣ ವಿರಾಟ್ ಕೊಹ್ಲಿನೇ ಬ್ಯಾಟಿಂಗ್ ಮಾಡ್ತಿದ್ದಾರೆ ಎಂಬ ಅನುಮಾನ ಬರುತ್ತೆ. ಕೊಹ್ಲಿಯಂತೆ ಬ್ಯಾಟಿಂಗ್ ಮಾಡ್ತಿರುವ 18 ರ ಹರೆಯದ ಉಸಾಮಾ, ಇದೀಗ ಪಾಕ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕ್ರಿಕೆಟ್ ತನ್ನ ಉಸಿರು ಎಂದುಕೊಂಡಿರುವ ಉಸಾಮಾ, ಕೊಹ್ಲಿಯಂತೆ ನಾವಿರುವುದೇ ಬೌಲರ್ ಗಳನ್ನು ದಂಡಿಸಲು ಎಂಬಂತೆ ಇತ್ತೀಚೆಗೆ ನಡೆದ ಪಂದ್ಯವೊಂದರಲ್ಲಿ 39 ಎಸೆತಗಳಲ್ಲಿ 69 ರನ್ ಗಳಿಸಿದ್ರು.
ಪಾಕ್ ಆಯ್ಕೆದಾರರ ಕಣ್ಣು ಉಸಾಮಾ ಮೇಲಿದೆ. ಹೀಗಾಗಿ ಮುಂದಿನ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಉಸಾಮಾಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕೊಹ್ಲಿಯಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಈ ಯುವ ಆಟಗಾರನ ವಿಡಿಯೋ ಇದೀಗ ಭಾರತದಲ್ಲೂ ವೈರಲ್ ಆಗಿದೆ. ಸದ್ಯ ಅಂತರಾಷ್ಟ್ರೀಯ ಪಂದ್ಯವನ್ನಾಡಬೇಕು ಅನ್ನೋದು ಈ ಯುವ ಆಟಗಾರನ ಕನಸಾಗಿದೆ.
18 year old Dera Murad Jamali-born Usama Baloch batting in the Corporate T20 Cup. He models his batting on Virat Kohli #Cricket pic.twitter.com/B17pT57o78
— Saj Sadiq (@Saj_PakPassion) May 12, 2019