
ದೈತ್ಯ ದೇಹಿ ಕ್ರಿಸ್ ಗೇಲ್ ಕ್ರಿಕೆಟ್ ಮೈದಾನದಲ್ಲಿ ಮಿಂಚು ಹರಿಸಿದಂತೆಯೇ, ತಮ್ಮ ವರ್ತನೆಯಿಂದಲೂ ಗಮನಸೆಳೆದ ಆಟಗಾರ.
ಅವರೀಗ ತಮ್ಮ ದೇಹದ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎದೆಯ ಮೇಲೆ ಸಿಂಹದ ಚಿತ್ರವನ್ನು ಹಾಕಿಸಿಕೊಂಡಿದ್ದಾರೆ ಗೇಲ್. ಇದನ್ನು ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿದ್ದಾರೆ.
ಸಿಂಹದ ಮುಖದ ಎರಡೂ ಬದಿಯಲ್ಲಿ ರೆಕ್ಕೆಗಳನ್ನು ಬಿಡಿಸಿದ್ದು, ಈ ಆಕರ್ಷಕ ಚಿತ್ರ ಗೇಲ್ ಅಭಿಮಾನಿಗಳನ್ನು ಸೆಳೆದಿದೆ.