
ರವಿಚಂದ್ರನ್ ಅಶ್ವಿನ್ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. 47 ಟೆಸ್ಟ್ ಪಂದ್ಯಗಳಲ್ಲಿ 269 ವಿಕೆಟ್ ಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
ತಮ್ಮ ಈ ಸಾಧನೆಗೆ ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ ಆರ್. ಅಶ್ವಿನ್. ಬೆಂಗಳೂರಿನಲ್ಲಿ ಬಿ.ಸಿ.ಸಿ.ಐ. ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ದಿಲೀಪ್ ಸರ್ ದೇಸಾಯಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಪ್ರಶಸ್ತಿ ವಿತರಿಸಿದ ಮಾಜಿ ವಿಕೆಟ್ ಕೀಪರ್ ಫಾರೂಕ್, ಅಶ್ವಿನ್ ಕರ್ನಾಟಕದವರೆಂದು ಭಾವಿಸಿ, ಎ. ಪ್ರಸನ್ನ, ಬಿ.ಎಸ್. ಚಂದ್ರಶೇಖರ್ ಮತ್ತು ನಿಮ್ಮಂತಹ ಶ್ರೇಷ್ಠ ಸ್ಪಿನ್ನರ್ ಗಳನ್ನು ಕರ್ನಾಟಕ ರಾಜ್ಯ ಕೊಡುಗೆಯಾಗಿ ನೀಡಿದೆ. ಇದಕ್ಕೆ ಕರ್ನಾಟಕದ ನೀರಿನ ಗುಣ ಕಾರಣವಿರಬಹುದು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಿನ್, ಈ ಸಂದರ್ಭದಲ್ಲಿ ನಾನು ರಾಜಕೀಯ ಬೆರೆಸಲು ಇಷ್ಟಪಡಲಾರೆ. ಆದರೆ, ನಾವು ಕಾವೇರಿ ನೀರನ್ನು ಕುಡಿಯುತ್ತೇವೆ. ಇದೇ ನನ್ನ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪ್ರಧಾನ ಕೋಚ್ ಅನಿಲ್ ಕುಂಬ್ಳೆ, ಕೆ.ಎಲ್. ರಾಹುಲ್ ಸೇರಿದಂತೆ ಹಲವರು ಚಪ್ಪಾಳೆ ತಟ್ಟಿದ್ದಾರೆ.