ಲಂಡನ್: ಆಟವಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅನಾಹುತ ಸಂಭವಿಸುತ್ತವೆ. ಮೈದಾನದಲ್ಲಿ ಆಟಗಾರರು ಕೈ, ಕಾಲು ಮುರಿದುಕೊಂಡ ಅನೇಕ ಘಟನೆಗಳು ನಡೆದಿವೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಆಟಗಾರನ ಕಾಲು ಮುರಿದಿದ್ದು, ಇದರಿಂದ ಅಂಜದ ಆತ, ಒಂದೇ ಕಾಲಿನಲ್ಲಿ ಓಡಿ ಬಾಲನ್ನು ತಡೆದು ಕೀಪರ್ ಬಳಿಗೆ ಎಸೆದಿದ್ದಾರೆ. ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಯೋಜಿಸಿದ್ದ ಆಹ್ವಾನಿತ ವಿಕಲಚೇತನರ ಟಿ-20 ಪಂದ್ಯಾವಳಿಯಲ್ಲಿ ಇಂತಹುದೊಂದು ಘಟನೆ ನಡೆದಿದೆ.
ಇಂಗ್ಲೆಂಡ್ ಆಟಗಾರ ಲಿಯಾಮ್ ಥಾಮಸ್ ಫೀಲ್ಡಿಂಗ್ ಮಾಡುವಾಗ ಆಯತಪ್ಪಿ ಬಿದ್ದು, ಅವರ ಕೃತಕ ಕಾಲು ಮುರಿದು ಕೆಳಗೆ ಬಿದ್ದಿದೆ. ಒಂದೇ ಕಾಲಿನಲ್ಲಿ ಓಡಿ ಬಾಲ್ ಹಿಡಿದ ಥಾಮಸ್ ಅದನ್ನು ಕೀಪರ್ ಕಡೆಗೆ ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಛಲಬಿಡದೇ ಬಾಲ್ ಹಿಡಿದ ಥಾಮಸ್ ಅವರನ್ನು ಅಭಿನಂದಿಸಲಾಗಿದೆ.