Quantcast
Channel: ಕ್ರಿಕೆಟರ್ – Kannada Dunia | Kannada News | Karnataka News | India News
Viewing all articles
Browse latest Browse all 34

ಸುಶಾಂತ್ ‌ರನ್ನು ಕ್ರಿಕೆಟರ್‌ ಎಂದರಾ ರಾಹುಲ್….?

$
0
0
Fake News Alert: Morphed Rahul Gandhi Tweet Calling Sushant Singh ...

ಸಾಮಾಜಿಕ ಜಾಲತಾಣಗಳಲ್ಲಿ ಎಡ/ಬಲ/ಕಮ್ಯೂನಿಸ್ಟ್ ಎಂದು ಪಂಥಗಳನ್ನು ಮಾಡಿಕೊಂಡು ಪರಸ್ಪರ ಕಚ್ಚಾಡುವ ಸಾಕಷ್ಟು ನಿದರ್ಶನಗಳನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ದುರಂತ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸಾಕಷ್ಟು ಗಣ್ಯರು ಸಂತಾಪದ ಟ್ವಿಟ್‌ಗಳನ್ನು ಹಾಕಿದ್ದರು. ಇವರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸೇರಿದ್ದಾರೆ.

ರಾಹುಲ್ ಮಾಡಿದ್ದ ಟ್ವೀಟ್ ‌ಅನ್ನು ಮಾರ್ಫ್ ಮಾಡಿಕೊಂಡು, ಸುಶಾಂತ್‌ ಸಿಂಗ್ ರನ್ನು ನಟ ಎನ್ನುವ ಬದಲು ಕ್ರಿಕೆಟರ್‌ ಎಂದಿರುವುದಾಗಿ ಮಾಡಿ, ಅದರ ಸ್ಕ್ರೀನ್ ‌ಶಾಟ್‌ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದಿನೇ ದಿನೇ ಬೆಳೆಯುತ್ತಿರುವ ಸುಳ್ಳು ಸುದ್ದಿಗಳ ಕಾರ್ಖಾನೆಗಳ ಮತ್ತೊಂದು ಝಲಕ್ ಅನ್ನು ಇದು ಅನಾವರಣಗೊಳಿಸಿದೆ.


Viewing all articles
Browse latest Browse all 34

Trending Articles