

ಮೇ 15ರಂದು ವಿಶ್ವ ಕುಟುಂಬ ದಿನವನ್ನು ಆಚರಿಸಲಾಗಿದೆ. ಈ ವೇಳೆ ಖ್ಯಾತನಾಮರು ತಮ್ಮ ಕುಟುಂಬದ ಫೋಟೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಹ ಈ ದಿನದ ಅಂಗವಾಗಿ ಕ್ರಿಕೆಟ್ ಅಭಿಮಾನಿಗಳಿಗಾಗಿ ವಿಶೇಷ ಟಾಸ್ಕ್ ಒಂದನ್ನು ನೀಡಿದೆ.
ಅಂತರಾಷ್ಟ್ರೀಯ ಕುಟುಂಬ ದಿನದ ಸಂದರ್ಭದಲ್ಲಿ ನಿಮಗಾಗಿ ಫನ್ ಗೇಮ್ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಜಾಲತಾಣದಲ್ಲಿ ಸಾಲು ಪ್ರಕಟಿಸಿರುವ ಐಸಿಸಿ, 9 ಕ್ರಿಕೆಟಿಗರ ಬಾಲ್ಯದ ಫೋಟೋಗಳನ್ನು ಪ್ರಕಟಿಸಿದ್ದು, ಇದು ಯಾರೆಂದು ಊಹಿಸಬಲ್ಲಿರಾ ಎಂದು ಪ್ರಶ್ನಿಸಿದೆ.
ಐಸಿಸಿಯ ಈ ಟಾಸ್ಕ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನೂರಾರು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.
On the occasion of #InternationalFamilyDay, we bring you a fun game!
Can you guess these nine cricketers from their childhood photos?
pic.twitter.com/gdIybhfhZW
— ICC (@ICC) May 15, 2020