

2013 ರಲ್ಲಿ ತೆರೆಕಂಡಿದ್ದ ಕ್ರಿಕೆಟ್ ಪ್ರತಿಭೆ ಕುರಿತಾದ “ಕೈ ಪೊ ಚೆ” ಚಿತ್ರದಲ್ಲಿ ಆಲಿ ಹಷ್ಮಿ (ದಿಗ್ವಿಜಯ್ ದೇಶ್ ಮುಖ್) ಪಾತ್ರದಲ್ಲಿ ಕ್ರಿಕೆಟಿಗನಾಗಿ ಕಾಣಿಸಿಕೊಂಡು ತರಬೇತುದಾರ ಇಶಾನ್(ಸುಶಾಂತ್ ಸಿಂಗ್ ರಜಪೂತ್) ಅವರಿಂದ ಬೆಳಗಿದ್ದ ಪ್ರತಿಭೆ ಇದೀಗ ನೈಜ ಕ್ರಿಕೆಟಿಗನಾಗಿ ಕ್ರೀಡಾಂಗಣಕ್ಕೆ ಇಳಿಯಲಿದ್ದಾನೆ.
ಸತತ ಪರಿಶ್ರಮದಿಂದ ತೆರೆ ಮೇಲಿನ ಕನಸನ್ನು ನನಸು ಮಾಡಿಕೊಂಡಿರುವ ದೇಶ ಮುಖ್ ಈ ಸಾಲಿನ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾನೆ. ಫ್ರಾಂಚೈಸಿ ಈತನನ್ನು 20 ಲಕ್ಷಕ್ಕೆ ಖರೀದಿಸಿದೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಈತ ಹೌದು, ನಾನು ಆಲಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಇದೀಗ ನಿಜ ಜೀವನದಲ್ಲಿ ಕ್ರಿಕೆಟಿಗನಾಗುವ ಅವಕಾಶ ಒದಗಿಬಂದಿದೆ ಎಂದಿದ್ದಾನೆ. ನಟನೆ ಕ್ರಿಕೆಟಿಗ ಅಂದಾಗ ನನಗೆ ಕೋಪ ಬರುತ್ತಿತ್ತು. ಆದರೆ ಈಗ ನಾನು ನೈಜ ಕ್ರಿಕೆಟ್ ಪಟುವಾಗಿದ್ದು ಸಾಧಿಸುವ ಛಲ ಹೊಂದಿದ್ದಾನೆ ಎಂದಿದ್ದಾನೆ ದಿಗ್ವಿಜಯ್.
Guyssss!!
Remember that kid in Kai Po Che whom @itsSSR trains and helps him to become an international cricketer?
He is now picked up by @mipaltan for 20 lakhs. His name is Digvijay Deshmukh… What a story! #IPLAuction #IPL2020 pic.twitter.com/k0Lsz4VwOh
— Vinesh Prabhu (@vlp1994) December 19, 2019