

‘ಬಿಗ್ ಬಾಸ್’ ಷೋ ಎಂದರೆ ಅಲ್ಲಿ ವಿವಾದ ಇದ್ದೇ ಇರುತ್ತದೆ. ವಿವಾದಾತ್ಮಕ ವ್ಯಕ್ತಿಗಳನ್ನೇ ಬಹುತೇಕ ‘ಬಿಗ್ ಬಾಸ್’ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುವ ಕಾರಣ ಸ್ಪರ್ಧೆಯಿಂದ ಹೊರ ಬಿದ್ದರೂ ಅವರ ನಡೆ ನುಡಿಗಳ ಕಾರಣಕ್ಕೆ ‘ಬಿಗ್ ಬಾಸ್’ ವೀಕ್ಷಕರ ಕುತೂಹಲಕ್ಕೆ ಕಾರಣವಾಗುತ್ತಾರೆ.
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ನಲ್ಲಿ ಈ ಬಾರಿ ಸ್ಪರ್ಧಿಯಾಗಿದ್ದ ಆರ್ಶಿ ಖಾನ್, ಆರಂಭದಿಂದಲೂ ತನ್ನ ನಡೆಯಿಂದಾಗಿ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆರ್ಶಿ ಖಾನ್ ‘ಬಿಗ್ ಬಾಸ್’ ಮನೆಯೊಳಗಿದ್ದಾಗಲೇ ಆಕೆಯ ವಿರುದ್ದ ವಾರಂಟ್ ಜಾರಿಯಾಗಿತ್ತು.
ಇದೀಗ ಆರ್ಶಿ ಖಾನ್ ‘ಬಿಗ್ ಬಾಸ್’ ಮನೆಯಿಂದ ಹೊರ ಬಿದ್ದಿದ್ದು, ಕುಡಿದ ಮತ್ತಿನಲ್ಲಿ ಆಕೆ ಮಾಡಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆಯೇ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಆಫ್ರಿದಿ ಜೊತೆ ತಾನು ಸಂಬಂಧ ಬೆಳೆಸಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದ ಆರ್ಶಿ ಖಾನ್ ಈ ಹೊಸ ವಿಡಿಯೋದಲ್ಲಿ ಅಫ್ರಿದಿಗಾಗಿ ಲವ್ ಸಾಂಗ್ ಹಾಡಿದ್ದಾಳೆ. ”ಆರ್ಶಿ ಬದ್ನಾಮ್ ಹುಯೇ ಆಫ್ರಿದಿ ತೆರೇ ಲಿಯೇ….’ ಎಂದು ಆರ್ಶಿ ಕುಡಿದ ಮತ್ತಿನಲ್ಲಿ ಬಡಬಡಿಸಿದ್ದು, ಈ ವಿಡಿಯೋ ಕುರಿತು ನೆಟ್ಟಿಗರಿಂದ ತರಹೇವಾರಿ ಕಮೆಂಟ್ ಗಳು ವ್ಯಕ್ತವಾಗುತ್ತಿದೆ.