
ಪಾಕಿಸ್ತಾನದ ಉಮರ್ ಅಕ್ಮಲ್ ಸದ್ಯ ಕ್ರಿಕೆಟ್ ನಿಂದ ಸುದ್ದಿಯಲ್ಲಿಲ್ಲ. ತಂಡದಿಂದ ಅವರನ್ನು ಕೈಬಿಡಲಾಗಿದೆ. ಆದ್ರೆ ಅಕ್ಮಲ್ ಸದ್ಯ ಲಂಡನ್ ನಲ್ಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಈ ಖುಷಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಬೆಂಟ್ಲಿ ಕಾರಿನ ಜೊತೆಗೆ ನಿಂತಿರೋ ಫೋಟೋ ಒಂದನ್ನು ಅಕ್ಮಲ್ ಅಪ್ ಲೋಡ್ ಮಾಡಿದ್ದು, ಹಾರ್ಡ್ ವರ್ಕ್ ನಂತರ ಲಂಡನ್ ನಲ್ಲಿ ಎಂಜಾಯ್ ಮಾಡ್ತಿದ್ದೇನೆ ಅಂತಾ ಕ್ಯಾಪ್ಷನ್ ಕೊಟ್ಟಿದ್ರು. ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ನೋಡಿದ್ದೇ ತಡ ಎಲ್ರೂ ಉಮರ್ ಅಕ್ಮಲ್ ರ ಕಾಲೆಳೆದಿದ್ದಾರೆ.
ಟೀಕಾಕಾರರಿಂದ ಟ್ವೀಟ್ ಗಳ ಸುರಿಮಳೆಯಾಗಿದೆ. ಅಲ್ಲಿ ಹಾರ್ಡ್ ವರ್ಕ್ ಮಾಡಿದ್ರೆ ಕ್ಯಾಬ್ ಚಾಲಕನ ಕೆಲಸವಾದ್ರೂ ಸಿಗಬಹುದು, ಟ್ರೈ ಮಾಡು. ಯಾಕಂದ್ರೆ ಪಾಕ್ ಕ್ರಿಕೆಟ್ ತಂಡದಲ್ಲಿ ನಿನಗಿನ್ನು ಸ್ಥಾನವಿಲ್ಲ ಅಂತಾ ಓರ್ವ ಟ್ವೀಟ್ ಮಾಡಿದ್ದಾನೆ. ಬೆಂಟ್ಲಿ ಕಾರು ಖರೀದಿಸಲು ಹಣ ಎಲ್ಲಿಂದ ಬಂತು? ಬಹುಷಃ ಬೇರೆಯವರ ಕಾರಿನೆದುರು ಪೋಸ್ ಕೊಟ್ಟಿರಬೇಕು ಅಂತಾ ಇನ್ನೋರ್ವ ಕಮೆಂಟ್ ಹಾಕಿದ್ದಾನೆ.
ಈ ಟ್ರೋಲ್ ಗಳಿಂದ ಕಂಗಾಲಾದ ಉಮರ್ ಅಕ್ಮಲ್, ದಯವಿಟ್ಟು ನೆಗೆಟಿವ್ ಕಮೆಂಟ್ ಹಾಕ್ಬೇಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಅದನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ ಕ್ರಿಕೆಟ್ ಅಭಿಮಾನಿಗಳು. ಹೀನಾಯ ಪ್ರದರ್ಶನ ಹಾಗೂ ಫಿಟ್ನೆಸ್ ಕೊರತೆಯಿಂದಾಗಿ ಉಮರ್ ಅಕ್ಮಲ್ ಗೆ ಪಾಕ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅದರ ಬೆನ್ನಲ್ಲೇ ಟ್ವಿಟ್ಟರ್ ನಲ್ಲೂ ಸಾಲು ಸಾಲು ಅವಮಾನವಾಗಿದೆ.